ದೆಹಲಿಯಲ್ಲಿ ಬಿಜೆಪಿ ಕಚೇರಿಯಲ್ಲಿ ಬಿರುಸಿನ ಚಟುವಟಿಕೆಗಳು ಆರಂಭವಾಗಿದೆ. ಬುಧವಾರ ರಾತ್ರಿ ಗಡ್ಕರಿಯನ್ನು ಭೇಟಿ ಮಾಡಲು ಬಯಸಿದ್ದ ಯಡಿಯೂರಪ್ಪ ಬಣಕ್ಕೆ ಗಡ್ಕರಿ ದರ್ಶನ ಭಾಗ್ಯ ಸಿಕ್ಕಿಲ್ಲ. ಆದರೆ, ಇದಕ್ಕೂ ಮುನ್ನ ಸದಾನಂದ ಬಣ ತನ್ನ ನಡೆ ಇಟ್ಟಿದೆ.ಈ ನಡುವೆ ಮುಖ್ಯಮಂತ್ರಿ ಸದಾನಂದ ಗೌಡ, ಪಕ್ಷದ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರು ಪಕ್ಷದ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿಯನ್ನು ಅವರ ತೀನ್ ಮೂರ್ತಿ ಭವನದಲ್ಲಿ ಭೇಟಿ ಮಾಡಿ ತಮ್ಮ ಮನವಿ ಸಲ್ಲಿಸಿದ್ದಾರೆ.ಶಾಸಕರು, ಸಚಿವರನ್ನು ಹೈಜಾಕ್ ಮಾಡಿ ರೆಸಾರ್ಟ್...
|
ವೈಷ್ಣೋದೇವಿ ಪ್ರವಾಸ ನಿರತ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪಕ್ಷದ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಕೆಲಕಾಲ ಮಹತ್ವದ ಮಾತುಕತೆ ನಡೆಸಿದ್ದಾರೆ.ಶನಿವಾರ ಸಂಜೆ ನಿಗದಿಯಂತೆ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಬಳ್ಳಾರಿ ಉಪ ಚುನಾವಣೆ ಬಗ್ಗೆ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಸಭಾ ಸದಸ್ಯ ಅರುಣ್ ಜೇಟ್ಲಿ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.ಡಿವಿಎಸ್ ಗೆ ಯಡ್ಡಿ ಅಭಯ: ಮಾತುಕತೆ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಡಿವಿ ಸದಾನಂದ ಗೌಡರ ಸರ್ಕಾರಕ್ಕೆ...
|
ಬಳ್ಳಾರಿಯಲ್ಲಿ ಮಾಜಿ ಸಚಿವ ಶ್ರೀರಾಮುಲು ನೇತೃತ್ವದಲ್ಲಿ ಶುಕ್ರವಾರ ನಡೆಯುತ್ತಿರುವ 12ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಗಣ್ಯರು ಹಾಜರಾಗಿದ್ದರೆ, ಆದರೆ ಗಾಡ್ ಮದರ್ ಎಂದೇ ಬಿಂಬಿಸಲ್ಪಟ್ಟಿದ್ದ ಸುಷ್ಮಾ ಸ್ವರಾಜ್ ಗೈರು ಹಾಜರಾಗಿದ್ದಾರೆ. ಇಂದು ಬೆಳಗ್ಗೆ ನವದೆಹಲಿಯಿಂದ ಬಳ್ಳಾರಿಗೆ ಕುಟುಂಬ ಸಮೇತರಾಗಿ ಬಳ್ಳಾರಿಗೆ ಆಗಮಿಸಿದ ನಿತಿನ್ ಗಡ್ಕರಿಯವರನ್ನು ರೆಡ್ಡಿ ಸಹೋದರರು...
|
Timeline.ನವದೆಹಲಿ, ಅ 31: ಗುಜರಾತ್ ನಂತರ ಹಿಮಾಚಲಪ್ರದೇಶ ಬಿಜೆಪಿ ಘಟಕವೂ ಕೂಡಾ ಪಕ್ಷದ ರಾಷ್ಟ್ರಾಧ್ಯಕ್ಷರನ್ನೇ ಚುನಾವಣಾ ಪ್ರಚಾರದಿಂದ ದೂರವಿಡುವ ಮೂಲಕ ನಿತಿನ್ ಗಡ್ಕರಿ ತೀವ್ರ ಮುಖಭಂಗ ಅನುಭವಿಸಿದ್ದಾರೆ.ಗಡ್ಕರಿ ಕಟ್ಟಾ ಅನುಯಾಯಿಗಳು ಮತ್ತು ಸಂಘಪರಿವಾರದ ಕೆಲವರು ಗಡ್ಕರಿಗೆ ಹೀಗಾಗಬಾರದಾಗಿತ್ತು ಎಂದು ನೊಂದುಕೊಳ್ಳುತ್ತಿದ್ದರೆ ಗಡ್ಕರಿ ಅವರೇ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲು ಇಚ್ಛೆ ವ್ಯಕ್ತ ಪಡಿಸದ ಕಾರಣ ಅವರನ್ನು ಪ್ರಚಾರದಿಂದ ದೂರವಿಡಲಾಗಿದೆ ಎಂದು ಹಿಮಾಚಲ ಪ್ರದೇಶ ರಾಜ್ಯ ಬಿಜೆಪಿ ಘಟಕ...
|
ಹಾಲಿ ಅಧ್ಯಕ್ಷ ನಿತಿನ್ ಗಡ್ಕರಿ ಎರಡನೆಯ ಅವಧಿಗೆ ಮುಂದುವರಿಯುವುದು ಅನುಮಾನವಾಗಿದೆ. ಮೊನ್ನೆಯಷ್ಟೇ ಸೂರಜಕುಂಡದಲ್ಲಿ ಅತ್ಯುತ್ಸಾಹದಿಂದ ಗಡ್ಕರಿಯನ್ನು 2ನೆಯ ಅವಧಿಗೆ ಮುಂದುವರಿಸಲು ಪಕ್ಷದ ಸಂವಿಧಾನವನ್ನೇ ತಿದ್ದಿದ ಶಿಸ್ತಿನ ಪಕ್ಷಕ್ಕೆ ಈಗ ಭಾರಿ ನಿರಾಶೆಯಾಗಿದೆ.ಗಡ್ಕರಿ ಕುರಿತಾದ ಭ್ರಷ್ಟಾಚಾರ ಆರೋಪಗಳಲ್ಲಿ ಎಳ್ಳಷ್ಟೂ ಸತ್ಯವಿಲ್ಲ ಎಂದು ಶ್ರೀರಾಮನ ಮೇಲೆ ಆಣೆ-ಪ್ರಮಾಣ ಮಾಡುವ ಬಿಜೆಪಿಯ ಕೆಲ ಹಿರಿಯ ನಾಯಕರು ಈಗ ನಿಜಕ್ಕೂ ದಿಕ್ಕೆಟ್ಟಿದ್ದಾರೆ. ಭ್ರಷ್ಟಾಚಾರ ತನಗೆ ಒಗ್ಗುವುದಿಲ್ಲ ಎಂಬುದನ್ನು ಬಿಜೆಪಿಯ...
|
ರೆಡ್ಡಿ ಸಹೋದರರಿಗೆ ಗಾಡ್ ಫಾದರ್ ಆಗಿ ಬಂದಿರುವ ನಿತೀನ್ ಗಡ್ಕರಿ ಅವರನ್ನು ರೆಡ್ಡಿ ಬ್ರದರ್ಸ್ ಮೈಸೂರು ಟೋಪಿ ಹಾಕಿ, ಖಡ್ಗ ಕೊಟ್ಟು ಸನ್ಮಾನಿಸಿದರು. ಸಮಾರಂಭಕ್ಕೂ ಮುನ್ನ ಗಡ್ಕರಿಯವರು ಬಳ್ಳಾರಿ ಏರ್ ಪೋರ್ಟ್ ರಸ್ತೆಯ ಕಾಮಗಾರಿಯ ಭೂಮಿಪೂಜೆ ಮಾಡಿದರು. ಸಮಾವೇಶವನ್ನು ಉದ್ದೇಶಿಸಿ ಮಾತನಾಡಿ, ರಾಜಕೀಯಕ್ಕೆ ಕಾಲಿಟ್ಟಾಗಿನ ದಿನಗಳನ್ನು ನೆನಪಿಸಿಕೊಂಡರು.ಬಿಜೆಪಿಯಲ್ಲಿ ನಾನು ಸಾಮಾನ್ಯ ಕಾರ್ಯಕರ್ತನಾಗಿದ್ದೆ. ಗೋಡೆ ಬರೆಹಗಳನ್ನು ಬರೆಯುತ್ತಾ, ಪೋಸ್ಟರ್‌ಗಳನ್ನು ಹಚ್ಚುತ್ತಾ ಪಕ್ಷದ ಚಟುವಟಿಕೆಗಳಲ್ಲಿ ಪಾ...
|
ಇನ್ನೊಂದು ಅವಧಿಗೂ ನಿತಿನ್ ಗಡ್ಕರಿ ಅವರೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆಯೇ? ಆರೆಸ್ಸೆಸ್ ಹಿರಿಯ ನಾಯಕರು ಹಾಗೂ ಬಿಜೆಪಿಗೆ ಗಡ್ಕರಿ ಅವರ ಸಾಮರ್ಥ್ಯ ಹಾಗೂ ಕಾರ್ಯನಿರ್ವಹಣೆಯು ಖುಷಿ ತಂದಿದ್ದು, ಮುಂದಿನ ಅವಧಿಗೂ ಗಡ್ಕರಿಯವರನ್ನೇ ಮುಂದುವರಿಸುವ ಇರಾದೆ ಹೊಂದಿದ್ದಾರೆ ಎನ್ನಲಾಗಿದೆ. ಡಿಸೆಂಬರ್‌ನಲ್ಲಿ ಗಡ್ಕರಿ ಅವರ ೩ ವರ್ಷಗಳ ಅಧಿಕಾರಾವಧಿ ಪೂರ್ಣಗೊಳ್ಳಲಿದೆ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಟಿಕೆಟ್ ಹಂಚಿಕೆಯಿಂದ ಹಿಡಿದು ಪ್ರಚಾರದವರೆಗೂ ಮುಂಚೂಣಿಯಲ್ಲಿರುವ ಗಡ್ಕರಿ...
|
ಬಿಜೆಪಿಯ ಹಿರಿಯ ನೇತಾರ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಭಾನುವಾರ ೮೮ನೇ ವರ್ಷಕ್ಕೆ ಕಾಲಿಟ್ಟರು. ಈ ಸಂದರ್ಭದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಗಣ್ಯರು ಶುಭ ಹಾರೈಸಿದ್ದಾರೆ.ಭಾನುವಾರ ಪ್ರಧಾನಿ ಮನಮೋಹನ್ ಸಿಂಗ್ ಅಟಲ್ ನಿವಾಸಕ್ಕೆ ತೆರಳಿ ಸ್ಮರಣಿಕೆ ನೀಡಿ ಶುಭ ಹಾರೈಸಿದರು. ಇದೇ ವೇಳೆ ಅಟಲ್ ಜನ್ಮದಿನವನ್ನು "ಉತ್ತಮ ಆಡಳಿತದ ದಿನ' ಎಂದು ಬಿಜೆಪಿ ಆಚರಿಸುತ್ತಿದೆ ಎಂದು ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿ ತಿಳಿಸಿದ್ದಾರೆ. ವಾಜಪೇಯಿ ನೇತೃತ್ವದ ಎನ್‌ಡಿಎ ನೀಡಿದ್ದ ಉತ್ತಮ...
|
ಮಾಹೇಶ್ವರ್, ಜೂ.8: ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಅವರು ಕಳೆದ 15 ವರ್ಷಗಳಿಂದ ಕೂಡಿಟ್ಟಿರುವ ಆಸ್ತಿ ಪಾಸ್ತಿಯ ಸಮಗ್ರ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಜೊತೆ ನಿತಿನ್ ಗಡ್ಕರಿಆವರಿಗೆ ಇರುವ ಆತ್ಮೀಯ ಸಂಬಂಧ ಎಲ್ಲರಿಗೂ ತಿಳಿದ ವಿಷಯ. ಯಡಿಯೂರಪ್ಪ ಅವರಿಂದ ಗಡ್ಕರಿಗೆ ಭೂ ದಾನ ಕೂಡಾ ಸಿಕ್ಕಿರುವ ದಾಖಲೆಗಳಿದೆ ಎಂದು ದಿಗ್ವಿಜಯ್ ಹೇಳಿದರು.'ನಾನು ನನ್ನ ಆಸ್ತಿ ವಿವರಗಳನ್ನು...
|
ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಲು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರ ಬೆಂಬಲಿಗ ಸಚಿವರುಗಳು ಗೋವಾಗೆ ದೌಡಾಯಿಸಿದ್ದಾರೆ.ಸಚಿವರುಗಳಾದ ಬಸವರಾಜ್ ಬೊಮ್ಮಾಯಿ, ಉಮೇಶ್ ಕತ್ತಿ ಮತ್ತು ಸಿ ಎಂ ಉದಾಸಿ ಅವರು ಗೋವಾಗೆ ಪ್ರಯಾಣ ಬೆಳೆಸಿದ್ದಾರೆ. ಇದೇ ರವಿವಾರ (ಮಾ 11) ಯಡಿಯೂರಪ್ಪ ಅವರಿಗೆ ಅಭಿನಂದನಾ ಸಮಾರಂಭ ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿದ್ದು ಗಡ್ಕರಿ ಅವರನ್ನು ಈ ಸಮಾವೇಶಕ್ಕೆ ಆಹ್ವಾನಿಸಲು ತೆರಳುತ್ತಿದ್ದೇವೆ ಎಂದು ಸಚಿವರು ಹೇಳಿಕೆ ನೀಡಿದ್ದಾರೆ.ಯಡಿಯೂರಪ್ಪ ಅವರ ಶಕ್ತಿಪ್ರದರ್ಶನದ...
|