|
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದ ಮೈಕ್ರೋಸಾಫ್ಟ್ ಕಂಪನಿಯ ಬಹು ನಿರೀಕ್ಷಿತ"ಸರ್ಫೇಸ್' ಹೆಸರಿನ ಟ್ಯಾಬ್ಲೆಟ್ ಮಂಗಳವಾರ ಅನಾವರಣಗೊಂಡಿತು. ಹಾಲಿವುಡ್‌ನಲ್ಲಿ ನಡೆದ ಸಮಾರಂಭದಲ್ಲಿ ಸರ್ಫೇಸ್‌ನ ಎರಡು ಮಾದರಿಗಳಾದ ಸರ್ಫೇಸ್ ಆರ್‌ಟಿ ಹಾಗೂ ಸರ್ಫೇಸ್ ವಿಂಡೋಸ್ ಪ್ರೋ ಎಂಬ ಎರಡು ಮಾದರಿಗಳನ್ನು ಬಿಡುಗಡೆಗೊಳಿಸಲಾಯಿತು.೩ ವರ್ಷಗಳ ಹಿಂದಷ್ಟೇ ಬಿಡುಗಡೆಯಾಗಿ ಎಲ್ಲರ ಮನಸೂರೆಗೊಂಡಿದ್ದ ಆಪಲ್ ಐ-ಪ್ಯಾಡ್‌ಗೆ ಸೆಡ್ಡು ಹೊಡೆಯಲೆಂದೇ ಮೈಕ್ರೋಸಾಫ್ಟ್ ಬಿಡುಗಡೆಗೊಳಿಸಿರು...
|