|
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಕ್ಕಿ ಪಡಿಪಾಟಲು ಅನುಭವಿಸುತ್ತಿರುವ ಜನಾರ್ದನ ರೆಡ್ಡಿ ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ನೇರವಾಗಿ ಹೈದರಾಬಾದಿಗೆ ವಾಪಸಾಗಿದ್ದಾರೆ. ಜನಾ ರೆಡ್ಡಿಯನ್ನು ನಾಳೆ (ಸೆ.25) ಆಂಧ್ರದ ಎಸಿಬಿ ನ್ಯಾಯಾಲಯದಲ್ಲಿ ಹಾಜರುಪಡಿಸಬೇಕಾಗಿದೆ.ಜಾಮೀನು ಖರೀದಿ ಪ್ರಕರಣದಲ್ಲಿ ಆಂಧ್ರದ ಎಸಿಬಿ ಪೊಲೀಸರು ಜನಾರ್ದನ ರೆಡ್ಡಿಯನ್ನು ಪ್ರಮುಖ ಆರೋಪಿಯನ್ನಾಗಿ ಹೆಸರಿಸಿ, ಆರೋಪಪಟ್ಟಿ ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಸಿಬಿ ಪೊಲೀಸರು ಪ್ರಿಸನರ್ ಆನ್ ಟ್ರಾನ್ಸೀಟ್ ಆದೇಶದ ಮೇರೆಗೆ ಇಂದು...
|