| ರಾಯಚೂರು ವಿಧಾನಸಭಾ ಕ್ಷೇತ್ರದಲ್ಲಿ ಠೇವಣಿ ಕಳೆದುಕೊಂಡಿದ್ದ ಸಿನಿಮಾ ನಟಿ, ಮುಂಗಾರುಮಳೆ ಬೆಡಗಿ ಪೂಜಾಗಾಂಧಿ ಅವರು ಸೋಮವಾರ (ಮೇ 20) ನಗರಕ್ಕೆ ಭೇಟಿ ನೀಡಿದ್ದರು. ಸೋತ ಮೇಲೆ ಅವರು ಇದೇ ಮೊದಲ ಬಾರಿಗೆ ರಾಯಚೂರಿಗೆ ಆಗಮಿಸಿತ್ತಿರುವುದು.ರಾಯಚೂರು ರಿಪೋರ್ಟರ್ಸ್ ಗಿಲ್ಡ್ ನಲ್ಲಿ ಪತ್ರಕರ್ತರೊಂದಿಗೆ ಮಾತಿಗೆ ಇಳಿದ ಅವರು, ಆಗಿದ್ದಾಗಿದೆ ಇನ್ನು ಮುಂದೆ ಇಲ್ಲಿಯೇ ನೆಲೆಸುತ್ತೇನೆ ಎಂದರು. ತಮಗೆ ಯಾರು ಓಟು ಹಾಕಲಿ ಬಿಟ್ಟಿರಲಿ ತಮಗೇನು ಬೇಜಾರಾಗಿಲ್ಲ. ಇದೂ ಒಂದು ಎಕ್ಸ್ ಪೀರಿಯನ್ಸ್ ಎಂದು ತಿಳಿಯುತ್ತೇನ... |