|
ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮನ್ ಇನ್ಸ್ಟಿಟ್ಯೂಟ್ ಟೆಕ್ನೊಲಜಿ ಮತ್ತು ಮ್ಯಾನೇಜ್ಮೆಂಟ್ ನ ಎಂಬಿಎ ಅಂತಿಮಾ ವಿದ್ಯಾರ್ಥಿಗಳಿಗೆ ಬಿಳೊಡುಗೆ ಸಮಾರಂಭ ನಡೆಯಿತು.ಮುಖ್ಯ ಅತಿಥಿಯಾಗಿದ್ದ ಪ್ರಿನ್ಸಿಪಾಲ್ ಸಿವಿಲ್ ನ್ಯಾಯಾಧೀಶ ರವಿ ಎಂ.ನಾಯ್ಕ ಮಾತನಾಡಿ ನಿಸ್ವಾರ್ಥಿ ಹಿರಿಯರಿಂದಾಗಿ ಅಂಜುಮನ್ ಶಿಕ್ಷಣ ಸಂಸ್ಥೆ ಇಂದು ತನ್ನತನವನ್ನು ಉಳಿಸಿಕೊಂಡು ಬಂದಿದೆ. ಅಂಜುಮನ್ ಸಂಸ್ಥೆಯಿಂದಾಗಿ ಭಟ್ಕಳದ ಮುಸ್ಲಿಮ್ ಸಮುದಾಯದಲ್ಲಿ ಶೈಕ್ಷಣಿಕ ಕ್ರಾಂತಿಯುಂಟಾಗಿದೆ ಎಂದರು. ಆತ್ಮ ವಿಶ್ವಾಸ, ಪ್...
|