| ಟೈಟಾನಿಕ್ ಎಂಬ ಹೆಸರು ಕೇಳಿದರೆ ಸಾಕು, ಆ ಹಾಲಿವುಡ್ ಚಿತ್ರವೇ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಅಷ್ಟರಮಟ್ಟಿಗೆ ಟೈಟಾನಿಕ್ ಸಿನಿಮಾ ದೇಶ ಭಾಷೆಗಳನ್ನು, ಕಾಲಮಿತಿಗಳನ್ನು ಮೀರಿ ಜನಪ್ರಿಯವಾಗಿದೆ. ಕಳೆದ ಶತಮಾನದ ಅಂತ್ಯದಲ್ಲಿ ಅಂದರೆ ನವೆಂಬರ್ 1, 1997 ರಂದು ಜಗತ್ತಿನಾದ್ಯಂತ ಬಿಡುಗಡೆಯಾದ ಈ ಚಿತ್ರದ 2D ಆವೃತ್ತಿಯನ್ನು ಜಗತ್ತಿನಾದ್ಯಂತ ಅಸಂಖ್ಯಾತ ಜನ ವೀಕ್ಷಿಸಿ ಮೂಗಿನ ಮೇಲೆ ಬೆರಳಿಟ್ಟಿದ್ದರು.ಈಗ ಅದೇ ಟೈಟಾನಿಕ್ ಚಿತ್ರ '3D ತಂತ್ರಜ್ಞಾನ' ಅಳವಡಿಸಿಕೊಂಡು ಮತ್ತೆ ಪ್ರೇಕ್ಷಕರೆದುರು ಪ್ರತ್ಯಕ... |