| ಉತ್ತರ ಮೆಕ್ಸಿಕೋದಲ್ಲಿರುವ ಕ್ಯಾಸಿನೋಕ್ಕೆ ನುಗ್ಗಿದ ಬಂದೂಕುಧಾರಿಯೊಬ್ಬ ಗ್ಯಾಸೋಲಿನ್ ಸುರಿದು ಬೆಂಕಿ ಹಚ್ಚಿದ್ದು,ಈ ಸಂದರ್ಭದಲ್ಲಿ 53 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ಪೈಕಿ ಜೂಜುಕೋರರು ಹಾಗೂ ಕ್ಯಾಸಿನೋ ಕೆಲಸಗಾರರೂ ಸೇರಿದ್ದಾರೆ. ಬೆಂಕಿಯಿಂದ ಸುಟ್ಟು ಹೋಗಿರುವ ಕ್ಯಾಸಿನೋ ಹೊರಗೆ ಜಮಾಯಿಸಿದ ಜನರು ಮೃತಪಟ್ಟವರ ಬಗ್ಗೆ ಪೊಲೀಸರು ಮಾಹಿತಿ ನೀಡುತ್ತಿಲ್ಲ ಎಂದು ತಮ್ಮ ದುಃಖವನ್ನು ತೋಡಿಕೊಂಡಿದ್ದಾರೆ. ಕೆಲ ಸಮಯದ ನಂತರ ಪೊಲೀಸರು ಮೃತ ದೇಹಗಳನ್ನು ಗುರುತಿಸಲು ಅನುಮತಿ ನೀಡಿದರು. ಈ ಕುರಿತು... |