| ಕರ್ನಾಟಕ ಜನಗಣತಿ ಕಾರ್ಯಪಡೆ ನಿರ್ದೇಶಕ ಅನಿಲ್ ಕುಮಾರ್ ಅವರು ಬೆಂಗಳೂರಿನಲ್ಲಿಂದು ಬಿಡುಗಡೆ ಮಾಡಿರುವ 2011ರ ಜನಗಣತಿ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಇರುವ ಒಟ್ಟು ಜನಸಂಖ್ಯೆ 6,10,95,297. ದೇಶದ ಒಟ್ಟು ಜನಸಂಖ್ಯೆ 121 ಕೋಟಿ.ರಾಜ್ಯದ ಒಟ್ಟು ಆರು ಕೋಟಿ ಜನಸಂಖ್ಯೆ ಪೈಕಿ ಪುರುಷರ ಸಂಖ್ಯೆ 3,೦9,66,657, ಮಹಿಳೆಯರ ಜನಸಂಖ್ಯೆ 3,01,28,640. ರಾಜ್ಯದಲ್ಲಿರುವ ಎಸ್ಸಿ ಜನಾಂಗ ಒಟ್ಟು ಜನಸಂಖ್ಯೆ ಒಂದು ಕೋಟಿ ನಲವತ್ತು ಲಕ್ಷ. ಎಸ್ಟಿ ಜನಸಂಖ್ಯೆ 42,48,987.ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ... |