| ತುಮಕೂರು, ಫೆ.22: ರಾಜಕಾರಣಿಗಳಿಗೂ, ಪ್ರಾಣಿಗಳಿಗೂ ಅನ್ಯೋನ್ಯ ಸಂಬಂಧ. ರಾಜಕಾರಣಿಗಳು ಎಮ್ಮೆಯಂತೆ ದಪ್ಪ ಚರ್ಮದವರು ಎಂದು ಬಣ್ಣಿಸಿ, ಮತದಾರರು ಸಮಾಧಾನಪಟ್ಟುಕೊಳ್ಳುತ್ತಾರೆ. ಆದರೆ ರಾಜಕಾರಣಿಗಳೋ ಪ್ರಾಣಿಗಳ ಹೆಸರುಗಳನ್ನು ಪರಸ್ಪರ ಆರೋಪಿಸಿಕೊಂಡು ಇದೇ ಮತದಾರರಿಗೆ ಬಿಟ್ಟಿ ಮನರಂಜನೆ ಕೊಡುತ್ತಾರೆ. ತಮ್ಮ ಮಾನಮರ್ಯಾದೆಯನ್ನು ಹರಾಜಿಗಿಡುತ್ತಾರೆ. ಜತೆಗೆ, ಆ ಪ್ರಾಣಿಗಳ ಮಾನವನ್ನೂ ಕಳೆಯುತ್ತಾರೆ.ಪಾಪ ಆ ಪ್ರಾಣಿಗಳು ಎಷ್ಟು ಬೇಜಾರು ಮಾಡಿಕೊಳ್ಳುತ್ತವೆಯೋ!? ಈ ಅವಿವೇಕಿ ರಾಜಕಾರಣಿಗಳು ಒಬ್ಬರ ಮೇಲೊಬ್ಬರು... |